ವಿಶೇಷ ಚೇತನ ಮಕ್ಕಳಿಗೆ ಉಚಿತ UDID ಅರ್ಜಿ ಸಲ್ಲಿಸಲು ಅವಕಾಶ

ವಿಶೇಷ ಚೇತನ ಮಕ್ಕಳಿಗಾಗಿ ಉಚಿತ ಸೌಲಭ್ಯ.

ಪಾಲಕರೆ /ಪೋಷಕರೇ ವಿಶೇಷ ಚೇತನ ಮಕ್ಕಳಿಗಾಗಿ ಸರ್ಕಾರ RPWD -2016 ಕಾನೂನು ಜಾರಿಯಾಗಿದ್ದು ಪಾಲಕರಿಗೆ ಮತ್ತು ಮಕ್ಕಳಿಗೆ ಜಾಗೃತಿ ಅವಶ್ಯಕತೆ ಹಾಗೂ ಸೌಲಭ್ಯ ಒದಗಿಸಬೇಕಾಗಿದ್ದು ಪಾಲಕರ ಕರ್ತವ್ಯವಾಗಿದೆ ಈ ದಿಶೆಯಲ್ಲಿ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ವತಿಯಿಂದ ಸೌಲಭ್ಯ ಒದಗಿಸಲು ಸಿದ್ದತೆ ಮಾಡಿಕೊಂಡಿದೆ.ವಿಶೇಷ ಚೇತನ ಮಕ್ಕಳ 21 ನ್ಯೂನತೆ ಇದ್ದು ಮುಖ್ಯವಾಗಿ ದೈಹಿಕ, ಮಾನಸಿಕ ಅಥವಾ ಬೌದ್ಧಿಕ ಸವಾಲುಗಳನ್ನು ಎದುರಿಸುವ ಮಕ್ಕಳು, ಅವರಿಗೆ ಸೂಕ್ತವಾದ ಶಿಕ್ಷಣ, ಕ್ರೀಡೆ ಮತ್ತು ಇತರೆ ಸಮಗ್ರ ಚಟುವಟಿಕೆಗಳಲ್ಲಿ ಭಾಗವಹಿಸಲು ವಿಶೇಷ ಬೆಂಬಲ ಮತ್ತು ಅವಕಾಶಗಳು ಬೇಕಾಗುತ್ತವೆ.

ಡೌನ್ ಸಿಂಡ್ರೋಮ್, ಆಟಿಸಂ ನರ ರೊಗ ವೈಜ್ಞಾನಿಕ ಸಮಸ್ಯೆಗಳು, ದೃಷ್ಟಿ ಮತ್ತು ಶ್ರವಣದೋಷ ಹೊಂದಿರುವ ಮಕ್ಕಳು ವಿಶೇಷ ಚೇತನ ಮಕ್ಕಳ ಗುಂಪಿಗೆ ಸೇರುತ್ತಾರೆ. ಅವರಿಗೆ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಮತ್ತು ಅವರ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುವುದು ಮುಖ್ಯ.ವಿಶೇಷ ಚೇತನ ಮಕ್ಕಳ ಅಗತ್ಯತೆಗಳು ಮತ್ತು ಸವಾಲುಗಳುಶಿಕ್ಷಣ,ಆರೋಗ್ಯ ಮತ್ತು ನೈರ್ಮಲ್ಯ,ಸಮಾಜಿಕ ಒಳಗೊಳ್ಳುವಿಕೆ,ಸಾಮರ್ಥ್ಯ ವಿಕಸನಜಾಗೃತಿ ಮೂಡಿಸುವಿಕೆ: ವಿಶೇಷ ಮಕ್ಕಳ ಸಬಲೀಕರಣದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅವರಿಗೆ ಸಹಾಯ ಮಾಡುವುದು ಅವಶ್ಯಕ ಆಗಿದೆ. ಕಲ್ಬುರ್ಗಿ ಜಿಲ್ಲೆಯಲ್ಲಿ ಸುಮಾರು 2500 ವಿಶೇಷ ಚೇತನ ಮಕ್ಕಳು ಇರಬಹುದು ಎಂದು ಅಂದಾಜಿಸಲಾಗಿದೆ. ಕೆಲವೊಂದು ಮಕ್ಕಳು ಮನೆ ಹೊರಗಡೆ ಬರಲು ಆಗುವುದಿಲ್ಲ ಏಕೆಂದರೆ ಅವರು ಪೂರ್ತಿ ಅಂಗವೈಕಲ್ಯ ಹೊಂದಿದವರಾಗಿರುತ್ತಾರೆ.ವಿಶೇಷ ಚೇತನ ಮಕ್ಕಳಿಗೆ ಸರ್ಕಾರದಿಂದ ಅನೇಕ ಯೋಜನೆಗಳು ಪಡೆಯಬೇಕಾದರೆ ಅವರಿಗೆ ಮುಖ್ಯವಾಗಿ ಯುಡಿಐಡಿ ಕಾರ್ಡ್ ಅವಶ್ಯಕತೆ ಇದೆ. ಇಂಥ ಮಕ್ಕಳ ಯುಡಿಐಡಿ ಕಾರ್ಡ್ ಮಾಡಿಸಿಕೊಡಲು ಅಂತರ್ಜಾಲ ಮೂಲಕ ಅರ್ಜಿ ಹಾಕಲು ಯಾವುದೇ ಶುಲ್ಕ ಪಡೆಯದೆ ಅವರಿಗೆ ಪಾಳಾದ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ಸಹಕಾರ ನೀಡಲಾಗುವುದು.ಸರ್ಕಾರದಿಂದ ಸಿಗುವ ಯೋಜನೆಗಳನ್ನು ತಲುಪಿಸುವಂತಹ ಪ್ರಯತ್ನ ಮಾಡಲಾಗುವುದು. ವಿಶೇಷ ಚೇತನ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಅವರಿಗೆ ವಿದ್ಯಾಭ್ಯಾಸಕ್ಕಾಗಿ ಸಾಧನಾ ಸಲಕರಣೆಗಳನ್ನು ನೀಡಿ ಬೆಂಬಲಿಸಲಾಗುವುದು ಪ್ರತಿ ರವಿವಾರ ಯುಡಿಐಡಿ ಕಾರ್ಡ್ ಅರ್ಜಿ ಸಲ್ಲಿಸಲು ಉಚಿತವಾಗಿ ಅವಕಾಶ ಮಾಡಿಕೊಡಲಾಗುವುದು.

ಶರಣಗೌಡ ಪಾಟೀಲ ಪಾಳಾ ಅಧ್ಯಕ್ಷರು ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್, ಕಲಬುರಗಿ ಸ್ಥಳ : ಶಿವಮಹಾಂತ ಆನ್ಲೈನ್ ಸೆಂಟರ್ ಸೆಂಚುರಿ ಬಿಲ್ಡಿಂಗ್ ವಲ್ಲಭಾಯಿ ಪಟೇಲ್ ವೃತ್ತ ಕಲಬುರಗಿ ಸಂಪರ್ಕಿಸಲು :9731555117ಸಿದ್ದರಾಮ ರಾಜಮಾನೆ -9449986157

Leave a Reply

Your email address will not be published. Required fields are marked *

SharanaGouda Patil Pala

Trust President

Social Media Platforms