ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ (ರಿ),
( ಸ್ಥಾಪನೆ-2014)
ಟ್ರಸ್ಟ್ ನ ಒಂದು ಹಿನ್ನೋಟ
ಶ್ರೀ ಶರಣಗೌಡ ಪಾಟೀಲ ಪಾಳಾ ಅವರ ತಂದೆಯವರಾದ ಶ್ರೀ ಸುಭಾಶ್ಚಂದ್ರ ಪಾಟೀಲರು ಅತ್ಯಂತ ಸರಳ ಸಜ್ಜನ ವ್ಯೆಕ್ತಿಯಾಗಿದ್ದರು ಇವರು ಮೂಲತಃ ಆಳಂದ ತಾಲೂಕಿನ ಬೊಮ್ಮನಹಳ್ಳಿಯ ಮಾಲಿ ಪಾಟೀಲ ಮನೆತನದವರು. ಸುಭಾಶ್ಚಂದ್ರ ಪಾಟೀಲರು ಚಿಕ್ಕವರಿದ್ದಾಗಲೇ ತಮ್ಮ ತಾಯಿಯ ತವರೂರಾದ ಕಲಬುರಗಿ ತಾಲೂಕಿನ ಪಾಳಾ ಗ್ರಾಮದಲ್ಲಿ ನೆಲೆನಿಂತರು. ಬಸವಾದಿ ಶರಣರ ವಿಚಾರಗಳನ್ನು ಅಧ್ಯಯನ ಮಾಡಿ ಆಧ್ಯಾತ್ಮದ ನಂಟು ಬೆಳೆಸಿಕೊಂಡು, ಪಿ.ಯು.ಸಿ ವರೆಗೆ ಅಭ್ಯಾಸ ಮಾಡಿದರು.
ಸುಭಾಶ್ಚಂದ್ರ ಪಾಟೀಲರು ಸಾಹಸಿ ಮತ್ತು ಪರೋಪಕಾರಿಯಾಗಿದ್ದರು. ಇವರ ಮೊದಲ ಪತ್ನಿ ಶ್ರೀಮತಿ ರಮಾದೇವಿ ಅವರಿಗೆ ರವಿ ಪಾಟೀಲ ಎಂಬ ಮಗುವಿಗೆ ಜನ್ಮ ನೀಡಿ ನಿಧನಹೊಂದಿದರು. ಎರಡನೆಯ ಪತ್ನಿ ಶ್ರೀಮತಿ ಸತ್ಯಮ್ಮ ಪಾಟೀಲ ಅವರಿಗೆ ಎರಡು ಮಕ್ಕಳು. ಮೊದಲನೇಯ ಮಗು ಶರಣಗೌಡ ಪಾಟೀಲ ಎರಡನೇ ಮಗು ರಮಾದೇವಿ ಪಾಟೀಲ ಜನಿಸಿದರು.
ಶ್ರೀ ಸುಭಾಶ್ಚಂದ್ರ ಪಾಟೀಲ ಪಾಳಾರವರು ಸಮಾಜಿಕ ಕಳಕಳಿಯುಳ್ಳವರಾಗಿದ್ದು, ಸಹೃದಯರಾಗಿದ್ದರು. ಅವರು ೧೯೭೨.ರ ಬರಗಾಲದ ಸಂದರ್ಭದಲ್ಲಿ ಪಾಳಾ ಗ್ರಾಮದ ಜನರನ್ನು ಜೀವನ ಸಾಗಿಸಲು ದುಡಿಮೆಗಾಗಿ ಗುಜರಾತಗೆ ಕರೆದುಕೊಂಡು ಹೋಗಿ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಿದರು. ಗ್ರಾಮದ ಬಡ ಮತ್ತು ನಿರ್ಗತಿಕರಿಗೆ ಸಹಾಯ ಸಹಕಾರ ನೀಡಿದವರು.
ಶ್ರೀ ಸುಭಾಶ್ಚಂದ್ರ ಪಾಟೀಲರು ೧೯೮೯ ರಲ್ಲಿ ಚಿಕ್ಕ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅವರ ಸತ್ಕಾರ್ಯಗಳನ್ನು ಮುಂದುವರೆಸಿಕೊಂಡು ಅವರ ಹೆಸರಿನಲ್ಲಿ ಅವರ ಸುಪುತ್ರರಾದ ಶ್ರೀ ಶರಣಗೌಡ ಪಾಟೀಲ ಪಾಳಾರವರು ೨೦೧೪ ರಲ್ಲಿ ಶ್ರೀ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ ಸಮಾಜಿಕ ಸತ್ಕಾರ್ಯಗಳನ್ನು ಮಾಡುತ್ತಿದ್ದಾರೆ.
ಟ್ರಸ್ಟ್ ನ ಗುರಿ ಮತ್ತು ಉದ್ದೇಶಗಳು :
- ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣ ಒದಗಿಸುವುದು.
- ಕ್ರೀಡಾಪಟುಗಳಿಗೆ (ಆರ್ಥಿಕವಾಗಿ ಹಿಂದುಳಿದ) ಸಹಾಯಧನ ಒದಗಿಸುವುದು.
- ಸಾಹಿತಿಗಳ ಪುಸ್ತಕ ಪ್ರಕಾಶನ ಮಾಡಿ ಪ್ರೋತ್ಸಾಹಿಸುವುದು.
- ವಿಕಲಚೇತನರ ಹಾಗೂ ಅನಾಥ/ನಿರ್ಗತಿಕ ಮಕ್ಕಳಿಗೆ ಪೋಷಿಸುವುದು.
- ಸ್ವಾಸ್ಥ್ಯ ಸಮಾಜ ಕಟ್ಟಲು ಸಾಧನೆಗೈದವರಿಗೆ ಗುರುತಿಸಿ ಪ್ರಶಸ್ತಿ-ಪುರಸ್ಕಾರ ನೀಡಿ ಸನ್ಮಾನಿಸಿ ಗೌರವಿಸುವುದು.
- ಸಮ ಸಮಾಜ ನಿರ್ಮಾಣ ಮಾಡಿದ ವಚನಕಾರರ ಆಶಯ ಸಾಕಾರಗೊಳಿಸುವುದು.
- ವಿಶ್ವಭಾತೃತ್ವ, ವಿಶ್ವಮಾನವ ಪರಿಕಲ್ಪನೆಯಿಂದ ಶಾಂತಿಯುತ ಸಮಾಜ ನಿರ್ಮಾಣ.
- ನಿರ್ಗತಿಕರಿಗೆ, ಬಡವರಿಗೆ (ಬದುಕಿಗೆ) ಮದುವೆ ಮಾಡಿಸಿ ಬದುಕಿಗೆ ನೆರವಾಗುವುದು.
- ನಾಗರಿಕ ಸಮಾಜ ನಿರ್ಮಾಣ, ವ್ಯಕ್ತಿತ್ವ ನಿರ್ಮಾಣ ಮಾಡಲು ಸಹಕಾರಿಯಾಗುವುದು.
- ಮನುಷ್ಯ-ಮನುಷ್ಯರಲ್ಲಿ ಎಲ್ಲಾ ರೀತಿಯ ಬೇಧ-ಭಾವ ಅಳಿಸಿ ಮಾನವಿತೆಯ ಬಾಂಧವ್ಯ ಸೃಷ್ಟಿಸಲು ಶ್ರಮಿಸುವುದು.
- ಕಲಾವಿದರಿಗೆ, ಪೋಷಿಸುವುದು ಮತ್ತು ಸಹಕಾರ ನೀಡುವುದು
- ವೈದ್ಯಕೀಯ ಶಿಬಿರ ಏರ್ಪಡಿಸುವುದು.
- ರೈತರಿಗಾಗಿ ಯೋಜನೆಗಳನ್ನು ರೂಪಿಸುವುದು
- ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುವುದು.

